Saturday, March 1, 2008

ಪ್ರಮಾಣ

ಉಸಿರಾದೆ ನೀನೆ ನನ್ನ

ನೀ ನನ್ನ ಹೃದಯಕ್ಕೆ ಬೇಕು ಚಿನ್ನ

ಕೊಡುವೆನು ನಿನಗೆ ಪ್ರಾಣ

ಎಂದು ನೀಡುವೆ ನಿನಗೆ ಪ್ರಮಾಣ


ಬರಿ ಉರಿಯುವ ಬತ್ತಿ ನಾನು

ಉರಿಸುವ ಎಣ್ಣೆ ನೀನಾಗುವೆಯೇನು ?

ನಾ ಕಾಣುವ ಕನಸು ನೀನು

ನೀ ಬಂದ ನನಸಾಗಿಸುವೆಯೇನು ?


ಪ್ರೀತಿಯ ಹಸಿರು ನೀನು

ನನ್ನ ಭಾವನೆ ಸುಂದರಗೋಲಿ ಸುವೆಯೇನು ?

ನಾ ಬರೆಯುವ ಕವನಕ್ಕೆ ಸ್ಪೂರ್ತಿ ನೀನು

ನನ್ನ ಕವನದ ಕಲ್ಪನೆಯಾಗುವೆಯೇನು ?


ನನ್ನ ಕಲ್ಪನೆಯ ಕಣ್ಣು ನೀನು

ನನ್ನ ಕೈ ಹಿಡಿದು ನಡೆಸುವೆಯೇನು ?

ಹೃದಯವು ಕೇಳುವುದು ನಿನ್ನನು

ನೀ ಅದರ ಬಡಿತವಾಗುವೆಯೇನು ?

............................ಜಪೂ

No comments: