Thursday, May 5, 2011

ಕಾಮನ್ವೆಲ್ತ್ ಗೇಮ್ಸ್

೧.೧೯೩೦ ರಲ್ಲಿ ಕೆನಡಾದ ಹ್ಯಾಮಿಲ್ಟನ್ ನಲ್ಲಿ ಪ್ರಥಮ ಕ್ರೀಡಾಕೂಟ ನಡೆಯುತು
೨.ಪ್ರಥಮ ಭಾರಿ ೧೧ ರಾಷ್ಟ್ರಗಳ ೪೦೦ ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
೩.೧೯೩೯ ೨ ನೇ ಮಹಾಯುದ್ಧದ ನಂತರ ೧೨ ವರ್ಷ ಕ್ರೀಡಾಕೂಟಕ್ಕೆ ವಿರಾಮ.
೪.೧೯೭೮ ರವರೆಗೆ 'ಬ್ರಿಟೀಷ್ ಎಂಪೈರ್ ಗೇಮ್ಸ್ ಹೆಸರಿನಲ್ಲಿ ನಡೆಯುತ್ತಿದ್ದ ಗೇಮ್ಸ್
ನಂತರ ಕಾಮನ್ವೆಲ್ತ ಎಂದು ಬದಲಾಯಿತು.
೫.ಭಾರತ ೧೯೩೪ ರಿಂದ ಈ ಕ್ರೀಡಾಕೂಟದಲ್ಲಿದೆ.
೬.೧೯೯೮ ರಲ್ಲಿ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಸಂದರ್ಭದಲ್ಲಿ ಕಾಮನ್ವೆಲ್ತ್
ಕ್ರೀಡಾಕೂಟದ ಫೆಡರೇಶನ್ ಅಸ್ತಿತ್ವಕ್ಕೆ ಬಂತು.
೭.೧೯ ನೇ ಕ್ರೀಡಾಕೂಟ ೩/೧೦/೧೦ ರಿಂದ ೧೪/೧೦/೧೦ ರವರೆಗೆ ದೆಹಲಿಯಲ್ಲಿ ನಡೆಯಿತು.

Friday, March 18, 2011

ಕರ್ನಾಟಕ ಲಾಂಛನದ ವಿಶೇಷತೆಗಳು

ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಇರುವ ಬಿಳಿ ಗಂಢಬೇರುಂಡ ಶಾಂತಿ,ಸಮಾನತೆ ಹಾಗೂ ಧರ್ಮದ ಸಿದ್ಧಾಂತಗಳನ್ನು ಸಾರುತ್ತದೆ.
ಆನೆಯ ಸೊಂಡಿಲು ಸಿಂಹದ ಶರೀರ ಹೊಂದಿರುವ ಶರಭದ ಚಿತ್ರ ಶಕ್ತಿ ಮತ್ತು ಧೈರ್ಯದ ಸಂಕೇತವಾಗಿದೆ. ಹಳದಿ ಬಣ್ಣ ಪ್ರಾಮಾಣಿಕತೆ ಹಾಗೂ ರಾಜ ನಿಷ್ಠೆಯನ್ನು ಪ್ರತಿನಿಧಿಸುತ್ತದೆ,ಕೆಂಪು ಧೈರ್ಯ ಮತ್ತು ಆಳ್ವಿಕೆಯ ಸಂಕೇತವಾಗಿದೆ.
ನೀಲಿ ವಿಶ್ವಭ್ರಾತೃತ್ವವನ್ನು ಸೂಚಿಸಿದರೆ,ಎರಡು ಹಸಿರು ಬಳ್ಳಿಗಳು ಸಮೃದ್ಧತೆಯ ಸಾರವಾಗಿದೆ.
ಮೇಲ್ಭಾಗದಲ್ಲಿ ನಾಲ್ಕು ತಲೆಯ ಸಿಂಹವನ್ನೋಳಗೊಂಡ ರಾಷ್ಟ್ರ ಲಾಂಛನವಿದ್ದರೆ ,ಕೆಳ ಭಾಗದಲ್ಲಿ ಸತ್ಯಮೇವ ಜಯತೇ ಎಂಬ ಘೋಷವಾಕ್ಯವಿದೆ. ಜೈ ಕರ್ನಾಟಕ ................