Friday, February 29, 2008

ಕನ್ನಡ ನಾಡ ಕನ್ನೆ

ಓ ಕನ್ನಡ ನಾಡ ಕನ್ನೆ

ನಾ ಕಂಡೆ ನಿನ್ನ ನಿನ್ನೆ

ಮಾಡಲು ಬಂದರೆ ಕಣ್ಣ ಸನ್ನೆ

ನೀ ಬಾರಿಸಿದಲ್ಲೇ ನನ್ನ ಕೆನ್ನೆ

.........................ಜಪೂ

ಚೂಡಿದಾರದ ಹುಡುಗಿ

ಚೂಡಿದಾರದ ಹುಡುಗಿ

ಏನಿದೆ
ನಿನ್ನಲ್ಲಿ ಬೆಡಗಿ ?

ಹುಡುಗರೆಲ್ಲ ಬೀಳುವರಲ್ಲೇ ತಲೆತಿರುಗಿ

ಏನು ಮಾಡಿದೆ ಅವರ ಮುಂದೆ ಹೋಗಿ ?


ಅವರಿಗೆ ನಿನ್ನದೇ ನೆನಪು

ಕನಸಲ್ಲೇ ನೀಡುವರು ನಿನಗೆ ಪಾಪು

ಅವರು ನಿನಗಾಗಿ ಆಗುವರು ಹಾಪು (ಮ್ಯಾಡ್)

ಕಣ್ಣು ತೆರೆದಾಗ ಆಗುವರು ಬೆಪ್ಪು

................................ಜಪೂ

ಮುತ್ತು

ನಲ್ಲೆ ಕೊಟ್ಟೆ ನನಗೊಂದು ಆವತ್ತು

ನಿನ್ನ ತುಟಿಯಿಂದ ಸಿಹಿ ಮುತ್ತು

ಆ ವೇಳೆ ನನ್ನ ಜೀವವೇ ಹಾರಿ ಹೋಗಿತ್ತು

ಜೀವ ಮರಳಿ ಬಂದಾಗ ನಿನ್ನ ತುಟಿಯ ಗುರುತು ಮೂಡಿತ್ತು


ಆ ಅಮೃತದ ನಿನ್ನ ತುಟಿ

ಯಾರೂ ಬರದ ಹಾಗೆ ಮಾಡಿತ್ತು ದಾಟಿ

ನನ್ನ ಹೃದಯದ ಕೋಟಿ

ಆ ನಿನ್ನ ತುಟಿಗಿಲ್ಲ ಸಾಟಿ

........................................ಜಪೂ

ಮತ್ತೆ ಕಾಣದೆ

ನನ್ನ ಹೃದಯದೊಳಗೆ

ಒಲುಮೆಯ ಹೂವು ಅರಳಿದೆ

ನಿನಗೆ ಮುಡಿಸಲು ಕಾಯಿತಿರುವೆ

ಒಮ್ಮೆ ಕಂಡವಳು ಎಲ್ಲಿ ಹೋದೆ ಮತ್ತೆ ಕಾಣದೆ .

.................................................ಜಪೂ

ಕಾಲೇಜ್

ನೀ ಹೋದೆ ಓದಲು ಕಾಲೇಜ್

ಅಲ್ಲಿ ನೀ ಸಂಪಾದಿಸಲು ನಾಲೆಜ್

ಆದರೆ ನೀ ಮಾಡಿದೆ ಪಾಠಗಳ ರೆಫ್ಫೂಜ್

ಕಾಲೇಜ್ ಮುಗಿಯುವದರೊಳಗೆ ಆದೇ ಮ್ಯಾರೇಜ್

......................................ಜಪೂ

ಫ್ರೆಂಡ್

ನೀನು ನನ್ನ ನೆಚ್ಚಿನ ಫ್ರೆಂಡ್

ನನ್ನ ನಿನ್ನಲ್ಲಿದೆ ಪ್ರೀತಿಯ ಬಾಂಡ್

ಸದಾ ನಮ್ಮಲ್ಲಿದೆ ಅಂಡರಸ್ಟಾಂಡ್

ಆದ್ದರಿಂದ ನಮ್ಮ ಸ್ನೇಹಕ್ಕಿಲ್ಲ ಎಂಡ್

.....................................ಜಪೂ

ತಾಯಿ

ಓ ನನ್ನ ತಾಯಿ

ಕರುಣೆ ,ಪ್ರೀತಿ ,ತ್ಯಾಗಗಳ ಅನುಯಾಯಿ

ನೀ ಲೋಕದಲ್ಲಿ ಪೂಜಮಯಿ

ನಿನ್ನಷ್ಟು ಯಾರೂ ಇಲ್ಲಾ ದಯಾಮಯಿ


......................................: ಪೂ