Thursday, May 5, 2011

ಕಾಮನ್ವೆಲ್ತ್ ಗೇಮ್ಸ್

೧.೧೯೩೦ ರಲ್ಲಿ ಕೆನಡಾದ ಹ್ಯಾಮಿಲ್ಟನ್ ನಲ್ಲಿ ಪ್ರಥಮ ಕ್ರೀಡಾಕೂಟ ನಡೆಯುತು
೨.ಪ್ರಥಮ ಭಾರಿ ೧೧ ರಾಷ್ಟ್ರಗಳ ೪೦೦ ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
೩.೧೯೩೯ ೨ ನೇ ಮಹಾಯುದ್ಧದ ನಂತರ ೧೨ ವರ್ಷ ಕ್ರೀಡಾಕೂಟಕ್ಕೆ ವಿರಾಮ.
೪.೧೯೭೮ ರವರೆಗೆ 'ಬ್ರಿಟೀಷ್ ಎಂಪೈರ್ ಗೇಮ್ಸ್ ಹೆಸರಿನಲ್ಲಿ ನಡೆಯುತ್ತಿದ್ದ ಗೇಮ್ಸ್
ನಂತರ ಕಾಮನ್ವೆಲ್ತ ಎಂದು ಬದಲಾಯಿತು.
೫.ಭಾರತ ೧೯೩೪ ರಿಂದ ಈ ಕ್ರೀಡಾಕೂಟದಲ್ಲಿದೆ.
೬.೧೯೯೮ ರಲ್ಲಿ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಸಂದರ್ಭದಲ್ಲಿ ಕಾಮನ್ವೆಲ್ತ್
ಕ್ರೀಡಾಕೂಟದ ಫೆಡರೇಶನ್ ಅಸ್ತಿತ್ವಕ್ಕೆ ಬಂತು.
೭.೧೯ ನೇ ಕ್ರೀಡಾಕೂಟ ೩/೧೦/೧೦ ರಿಂದ ೧೪/೧೦/೧೦ ರವರೆಗೆ ದೆಹಲಿಯಲ್ಲಿ ನಡೆಯಿತು.

Friday, March 18, 2011

ಕರ್ನಾಟಕ ಲಾಂಛನದ ವಿಶೇಷತೆಗಳು

ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಇರುವ ಬಿಳಿ ಗಂಢಬೇರುಂಡ ಶಾಂತಿ,ಸಮಾನತೆ ಹಾಗೂ ಧರ್ಮದ ಸಿದ್ಧಾಂತಗಳನ್ನು ಸಾರುತ್ತದೆ.
ಆನೆಯ ಸೊಂಡಿಲು ಸಿಂಹದ ಶರೀರ ಹೊಂದಿರುವ ಶರಭದ ಚಿತ್ರ ಶಕ್ತಿ ಮತ್ತು ಧೈರ್ಯದ ಸಂಕೇತವಾಗಿದೆ. ಹಳದಿ ಬಣ್ಣ ಪ್ರಾಮಾಣಿಕತೆ ಹಾಗೂ ರಾಜ ನಿಷ್ಠೆಯನ್ನು ಪ್ರತಿನಿಧಿಸುತ್ತದೆ,ಕೆಂಪು ಧೈರ್ಯ ಮತ್ತು ಆಳ್ವಿಕೆಯ ಸಂಕೇತವಾಗಿದೆ.
ನೀಲಿ ವಿಶ್ವಭ್ರಾತೃತ್ವವನ್ನು ಸೂಚಿಸಿದರೆ,ಎರಡು ಹಸಿರು ಬಳ್ಳಿಗಳು ಸಮೃದ್ಧತೆಯ ಸಾರವಾಗಿದೆ.
ಮೇಲ್ಭಾಗದಲ್ಲಿ ನಾಲ್ಕು ತಲೆಯ ಸಿಂಹವನ್ನೋಳಗೊಂಡ ರಾಷ್ಟ್ರ ಲಾಂಛನವಿದ್ದರೆ ,ಕೆಳ ಭಾಗದಲ್ಲಿ ಸತ್ಯಮೇವ ಜಯತೇ ಎಂಬ ಘೋಷವಾಕ್ಯವಿದೆ. ಜೈ ಕರ್ನಾಟಕ ................

Thursday, May 28, 2009

ಮಹತ್ವದ ವಿಷಯಗಳು

೧.೧೪ ನೇ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಅನೀಲ್ ಬಸು ಗೆದ್ದರು.(ಪ.ಬಂಗಾಲ್ ೫೦೯೨೫೦೨)

೨.ಹಂದಿ ಜ್ವರಕ್ಕೆ ಕಾರಣ ಹೆಚ್ ೧ ಏನ್ ೧ ಇನ್ ಫ್ಲೂನಜಾ

೩.೧೫ ನೇ ಲೋಕಸಭೆಯ ಸಚಿವ ಸಂಪುಟದ ಅತಿ ಕಿರಿಯ ಸಚಿವೆ ಅಗಾಥಾ ಸಂಗ್ಮ.(೨೭ ವ.)

೪.ಮನೀಶ್ ಪಾಂಡೆ ೨೦೦೯ ರ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಶತಕ ಭಾರಿಸಿದರು (ಆರ್.ಸಿ.ಬಿ. ಪರ ) ಇದರಿಂದ ಅವರು
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಶತಕ ಭಾರಿಸಿದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು .

೫. ೨೦೦೯ ರ ಇಂಡಿಯನ್ ಪ್ರಿಮಿಯರ್ ಲೀಗ್ ಚಾಂಪಿಯನ್ ಆಗಿ ಹೈದರಾಬಾದ್ ತಂಡ ಹೊರಹೊಮ್ಮಿತು .
(ರನ್ನರ್ ಅಪ್ ಆರ್ .ಸಿ.ಬಿ )

Monday, March 23, 2009

ನವ ವರ್ಷ

ಈ ನವ ವರ್ಷ

ನೀಡಲಿ ನೆಮ್ಮದಿ ಹರ್ಷ

ಹೊಡೆದು ಹಾಕಲಿ ಈ ಹೊಸ ವರ್ಷ

ಮನಸು -ಮನಸುಗಳಲ್ಲಿನ ಸಂಘರ್ಷ


ದೂರವಾಗಲಿ ಈ ವರ್ಷ ಭಯೋತ್ಪಾದಕರ ಅಟ್ಟಹಾಸ

ಬೀರಲಿ ನಮ್ಮವರು ನೆಮ್ಮದಿಯ ಮಂದಹಾಸ

ಸೇರಲಿ ನನ್ನ ಬಾಂಧವರ ಹೃದಯ ನಿವಾಸ

ಭ್ರಾತೃತ್ವ ,ಸ್ನೇಹ ,ಪ್ರೀತಿ ,ಉಲ್ಲಾಸ .

ಜಶಿಪೂ...............



ಯೋಗ

ಮೂಡಿದೆ ನನ್ನಲಿ ಅನುರಾಗ

ಚೆಲುವೆ ನಿನ್ನ ಆನನ ಕಂಡಾಗ

ಧುಮ್ಮಿಕ್ಕಿದೆ ಒಲವು ಆಗಿ ಆ ಜೋಗ

ಕೂಡುವುದೇ ಸಂಗಮವಾಗುವ ಯೋಗ?

ಜಶಿಪೂ ...................



Saturday, November 29, 2008

೨೬ ನೇ ದಿನಾಂಕಗಳಂದು ಭಾರತಲ್ಲಿ ನಡೆದ ಕಹಿ ಘಟನೆಗಳು

೧.೨೬ ಜನವರಿ ೨೦೦೧ ಗುಜರಾತನ ಕಚ್ ನಲ್ಲಿ ಭೂಕಂಪ.
೨. ೨೬ ಫೆಬ್ರವರಿ ೨೦೦೨ ಗೋದ್ರ ಹತ್ಯಾಕಾಂಡ .
೩. ೨೬ ಡಿಸೆಂಬರ ೨೦೦೪ ಸುನಾಮಿ ದುರಂತ್ ಸು.೧ ಮಿ ಜನ ಆಹುತಿ.
೪. ೨೬ ಜೂನ್ ೨೦೦೭ ಗುಜರಾತ ನಲ್ಲಿ ಪ್ರವಾಹ .
೫. ೨೬ ಸೆಪ್ಟೆಂಬರ್ ೨೦೦೮ ಅಹ್ಮದಾಬಾದ್ನಲ್ಲಿ ಸ್ಪೋಟ್.
೬. ೨೬ ನವೆಂಬರ್ ೨೦೦೮ ಭಾರತದ ಪ್ರತಿಷ್ಟಿತ ಹೋಟೆಲ್ ತಾಜ್ ನಲ್ಲಿ ಉಗ್ರರ ಅಟ್ಟಹಾಸ.
ಈ ದಾಳಿ ಕೇವಲ ತಾಜ್ ಮೇಲೆ ಅಲ್ಲದೆ ಹೋಟೆಲ್ ಒಬೆರೈ ಮತ್ತು ನಾರಿಮನ್ ಹೌಸ್ ಗಳ
ಮೇಲೆ ನಡೆಯಿತು.


Saturday, September 6, 2008

೫ .೧೯೭೪ ರಿಂದ ಬಿಕ್ಕಟ್ಟಿಗೆ ಸಿಲುಕಿದ್ದ ನಾಗರಿಕ ಪರಮಾಣು ಒಪ್ಪಂದಕ್ಕೆ ೬ /೦೯ /೨೦೦೮ ರಂದು

ಏನ್ ಎಸ್ ಜಿ ರಾಷ್ಟ್ರಗಳಿಂದ ಒಪ್ಪಿಗೆ ಪಡೆದು ಐತಿಹಾಸಿಕ ಒಪ್ಪಂದ ವಾಯಿತು ( ಪ್ರಧಾನಿ ಮನಮೋಹನ್

ಸಿಂಗ್ ಆಗಿದ್ದರು )