Tuesday, April 1, 2008

ಮನಸೆಂಬ ಹಕ್ಕಿ

ಮನಸು ಆಗಬೇಕೆಂದಿದೆ ಹಾರುವ ಹಕ್ಕಿ

ನೀ ತೊಡಿಸೆ ನಿನ್ನೊಲವಿನ ರೆಕ್ಕಿ

ನಾವ್ ಹಾರೋಣ ಆ ಮೋಡಕು ಮಿಕ್ಕಿ

ತರೋಣ ಆ ಸೂರ್ಯನೆಂಬ ಚುಕ್ಕಿ


ಆ ಸೂರ್ಯನೆಂಬ ಚುಕ್ಕಿಯ ಶಕ್ತಿ

ನಮಗಾಗಲಿ ಉರಿಯುವ ಮೇಣದ ಬತ್ತಿ

ಆ ಬೆಳಕಲ್ಲಿ ನಾವ್ ಬಿಚ್ಚೋಣ ಪ್ರಣಯದ ಬುತ್ತಿ

ಸುಳಿಯಲಾಗದೆ ಕತ್ತಲು ಸುಸ್ತಾಗಲಿ ಸುತ್ತಿ ಸುತ್ತಿ


ಉಂದಾದ ಮೇಲೆ ಪ್ರಣಯದ ಬುತ್ತಿ

ಇಟ್ಟ ಬರೋಣ ಆ ಕರಗದ ಮೇಣದ ಬತ್ತಿ

ಪಾಪ ! ಕತ್ತಲಿಗೆ ಸಿಗಲಿ ಮುಕ್ತಿ

ಕಾಯುತ್ತಿದೆ ಅಗಲಿಸಲು ನಮ್ಮನು ಆ ವಿರಹದ ಕತ್ತಿ

ಒಲವಿನ ನೆರಳು

ನೀ ನನ್ನ ಹೃದಯದಲ್ಲಿರುವವಳು

ನೀ ನನ್ನ ಭಾವದ ನೆರಳು

ಅಂದುಕೊಂಡೆ ಒಮ್ಮೆ ಹೋಗುವವಳು

ಆಗ ನೀ ಹೇಳಿದೆ ನಾ ನಿನ್ನೊಲವಿನ ನೆರಳು


ಕತ್ತಲಾದರೆ ನೆರಳಂತೆ ಕಾಣದವಳು

ಆದರೂ ನನ್ನ ಹೃದಯದಲ್ಲಿರುವವಳು

ನೆರಳಂತೆ ನನ್ನನ್ನೇ ಹಿಂಬಾಲಿಸಿದವಳು

ನೀ ನನ್ನೊಲವಿನ ನೆರಳು

ಮೀನು

ನಿನ್ನ ಹೃದಯ ಕೊಳದಲ್ಲಿ ಮೀನು

ಗೆಳತಿ ಆಗಿರುವೆ ನಾನು

ಅಲ್ಲಿಂದ ಎತ್ತಿದರೆ ನೀನು

ಬದುಕಿತೇ ಈ ಜೀವವಿನ್ನು ?


ಖುಷಿಯಿಂದ ಕೊಳದಲ್ಲಿ ಈಜುತ್ತಿರುವೆ

ನಿನ್ನೊಡನೆ ಸದಾ ನಾ ಇರುವೆ

ಒಮ್ಮೊಮ್ಮೆ ಕೊಪದಲಿ ಆಚೆ ಹಾಕುವೆ

ದೂರವಿರಲಾಗದೆ ಒದ್ದಾಡಿ ನಾ ಅಲ್ಲೇ ಮರಳುವೆ