Saturday, May 10, 2008

ಒಲವಿನ ಸಿರಿ

ನನ್ನ ಹೃದಯೇಶ್ವರಿ

ನೀ ಆಗುವೆಯಾ ಈಶ್ವರಿ ?

ಹೃದಯ ಕೇಳುತ್ತಿದೆ ನಿನ್ನ ಪರಿ ಪರಿ

ಕರುಣಿಸೆ ನಿನ್ನೊಲವಿನ ಸಿರಿ


ಸುತ್ತುತ್ತಿದೆ ಮನ ದುಂಬಿಯಾಗಿ

ನಿನ್ನೊಲವಿನ ಸಿಹಿ ಮಕರಂದಕಾಗಿ

ನೀಡು ನಿನ್ನ ಹೃದಯ ಪುಷ್ಪವನು ನನಗಾಗಿ

ಸವಿಯಲು ಪ್ರೀತಿಯ ಮಕರಂದವನು ಆನಂದವಾಗಿ

Monday, May 5, 2008

ನನ್ನವಳು ಬಳಕುವ ಬಳ್ಳಿ

ನನ್ನವಳು ಬಳಕುವ ಬಳ್ಳಿ

ನನ್ನ ಹೃದಯದ ಕಳ್ಳಿ


ಆದರೂ ಅವಳು ಬಲು ಸುಳ್ಳಿ


ಹೇಳುತ್ತಾಳೆ ನಾನಲ್ಲ ನಿಮ್ಮ ಹೃದಯ ಕಳ್ಳಿ



ಅವಳ ಓರೆ ಕಣ್ಣಿನ ನೋಟ

ಮಾಡಿಸಿದೆ ನನ್ನ ಮನಕೆ ಮಾಟ

ಇದು ಖಂಡಿತ ದಿಟ

ಕಾರಣ ನನಗೆ ಸೇರುತ್ತಿಲ್ಲ ಊಟ


ಬೆಳಗಿನ ಜಾವದಲ್ಲಿ

ನಿಲ್ಲುವಳು ಹೂ ಕೀಳುತ್ತಾ ಅಂಗಳದಲ್ಲಿ

ಕಣ್ಣು ಮಿಟುಕಿಸಿ ಸೇರುವಳು ಕೋಣೆಯಲ್ಲಿ

ಸಿಲುಕಿಸಿ ನನ್ನನ್ನು ಸಂಕಷ್ಟದಲ್ಲಿ


ಅವಳಿಗಾಗಿ ಓಡಾಡುತ್ತಿರಲು ನಾ ಅಂಗಳದಲ್ಲಿ

ಕದ್ದು ನೋಡುತ್ತಾಳೆ ಕಿಡಕಿಯಲ್ಲಿ

ಎಬ್ಬಿಸಿದವಳೇ ಅಲೆಯನ್ನು ಹೃದಯದಲ್ಲಿ

ಮರೆಯಾಗುವಳು ಕಿಟಕಿಯ ಪರದೆಯಲ್ಲಿ

Tuesday, April 1, 2008

ಮನಸೆಂಬ ಹಕ್ಕಿ

ಮನಸು ಆಗಬೇಕೆಂದಿದೆ ಹಾರುವ ಹಕ್ಕಿ

ನೀ ತೊಡಿಸೆ ನಿನ್ನೊಲವಿನ ರೆಕ್ಕಿ

ನಾವ್ ಹಾರೋಣ ಆ ಮೋಡಕು ಮಿಕ್ಕಿ

ತರೋಣ ಆ ಸೂರ್ಯನೆಂಬ ಚುಕ್ಕಿ


ಆ ಸೂರ್ಯನೆಂಬ ಚುಕ್ಕಿಯ ಶಕ್ತಿ

ನಮಗಾಗಲಿ ಉರಿಯುವ ಮೇಣದ ಬತ್ತಿ

ಆ ಬೆಳಕಲ್ಲಿ ನಾವ್ ಬಿಚ್ಚೋಣ ಪ್ರಣಯದ ಬುತ್ತಿ

ಸುಳಿಯಲಾಗದೆ ಕತ್ತಲು ಸುಸ್ತಾಗಲಿ ಸುತ್ತಿ ಸುತ್ತಿ


ಉಂದಾದ ಮೇಲೆ ಪ್ರಣಯದ ಬುತ್ತಿ

ಇಟ್ಟ ಬರೋಣ ಆ ಕರಗದ ಮೇಣದ ಬತ್ತಿ

ಪಾಪ ! ಕತ್ತಲಿಗೆ ಸಿಗಲಿ ಮುಕ್ತಿ

ಕಾಯುತ್ತಿದೆ ಅಗಲಿಸಲು ನಮ್ಮನು ಆ ವಿರಹದ ಕತ್ತಿ

ಒಲವಿನ ನೆರಳು

ನೀ ನನ್ನ ಹೃದಯದಲ್ಲಿರುವವಳು

ನೀ ನನ್ನ ಭಾವದ ನೆರಳು

ಅಂದುಕೊಂಡೆ ಒಮ್ಮೆ ಹೋಗುವವಳು

ಆಗ ನೀ ಹೇಳಿದೆ ನಾ ನಿನ್ನೊಲವಿನ ನೆರಳು


ಕತ್ತಲಾದರೆ ನೆರಳಂತೆ ಕಾಣದವಳು

ಆದರೂ ನನ್ನ ಹೃದಯದಲ್ಲಿರುವವಳು

ನೆರಳಂತೆ ನನ್ನನ್ನೇ ಹಿಂಬಾಲಿಸಿದವಳು

ನೀ ನನ್ನೊಲವಿನ ನೆರಳು

ಮೀನು

ನಿನ್ನ ಹೃದಯ ಕೊಳದಲ್ಲಿ ಮೀನು

ಗೆಳತಿ ಆಗಿರುವೆ ನಾನು

ಅಲ್ಲಿಂದ ಎತ್ತಿದರೆ ನೀನು

ಬದುಕಿತೇ ಈ ಜೀವವಿನ್ನು ?


ಖುಷಿಯಿಂದ ಕೊಳದಲ್ಲಿ ಈಜುತ್ತಿರುವೆ

ನಿನ್ನೊಡನೆ ಸದಾ ನಾ ಇರುವೆ

ಒಮ್ಮೊಮ್ಮೆ ಕೊಪದಲಿ ಆಚೆ ಹಾಕುವೆ

ದೂರವಿರಲಾಗದೆ ಒದ್ದಾಡಿ ನಾ ಅಲ್ಲೇ ಮರಳುವೆ

Monday, March 24, 2008

ಸಮಾಜ ವಿಜ್ಞಾನ (ಮುಂದುವರೆದ .....)

೧೯ . ಆರ್ಟೀಸಿಯನ್ ಬಾವಿಗಳು ಸಾಮಾನ್ಯವಾಗಿ ಕಂಡು ಬರುವುದು .

೧. ಗ್ರೇಟ್ ಬ್ರಿಟನ್ ನ ಪಿನ್ನೈನ ಪ್ರದೇಶದಲ್ಲಿ

೨. ಯುಗೊಸ್ಲೋವೊಯಾದ ಕಾರ್ಸ್ಟ್ ಪ್ರದೇಶದಲ್ಲಿ

೩.ಅ.ಸಂ .ಸ್ಥಾ. ದ ಕೆಂಟುಕಿ ಪ್ರದೇಶದಲ್ಲಿ

೪. ಆಗ್ನೇಯ ಆಸ್ಟ್ರೇಲಿಯಾ ದ ಸೌತ್ ವೆಲ್ಲ್ಸ್ ಪ್ರಾಂತ್ಯದಲ್ಲಿ

೨೦ .ಈ ಕೆಳಗಿನ ಸಂಪನ್ಮೂಲಗಳಲ್ಲಿ ಮುಗಿದು ಹೋಗುವ

ಸಂಪನ್ಮೂಲಗಳು ಯಾವವು ?

೧. ಕಲ್ಲಿದ್ದಲು ೨. ಕಲ್ಲೆನ್ನೇ ಮತ್ತು ನೈಸರ್ಗಿಕ ಅನಿಲ

೩. ಜಲ ವಿದ್ಯುತ್ ೪. ಖನಿಜ ಸಂಪತ್ತುಗಳು

೨೧. ಮಾನವನ ಪ್ರಥಮ ಬಗೆಯ ಉದ್ಯೋಗಗಳಿಗೆ ಹೊರತಾದುದು

೧. ವ್ಯವಸಾಯ ೨. ಗಣಿಗಾರಿಕೆ

೩. ಮೀನುಗಾರಿಕೆ ೪. ಹತ್ತಿ ಜವಳಿ ತಯಾರಿಕೆ

೨೨. ಸುಂದರಿ ಮರವು ಯಾವ ಬಗೆಯ ಕಾಡುಗಳಲ್ಲಿ ಕಂಡು ಬರುತ್ತದೆ .

೧. ಉಷ್ಣವಲಯದ ಆರ್ದ್ರ ಮಳೆಯ ಕಾಡುಗಳಲ್ಲಿ

೨. ಎಲೆ ಉದುರುವ ಮಾನ್ಸೂನ್ ಬಗೆಯ ಕಾಡುಗಳಲ್ಲಿ

೩. ಮ್ಯಾನ್ ಗ್ರೋ ಬಗೆಯ ಕಾಡುಗಳಲ್ಲಿ

೪.ಹಿಮಾಲಯ ದಲ್ಲಿನ ಸೂಚಿಪರ್ಣ ಕಾಡುಗಳಲ್ಲಿ

೨೩. ಪ್ರಪಂಚದಲ್ಲಿ ಭಾರತವು ಪ್ರಥಮ ಸ್ಥಾನದಲ್ಲಿ ಉತ್ಪಾದಿಸುವವು .

೧. ಚಹಾ ಮತ್ತು ಕಬ್ಬಿಣದ ಅದಿರು ೨. ಮೈಕಾ ಮತ್ತು ಚಹಾ

೩. ಚಹಾ ಮತ್ತು ಕಾಫಿ ೪. ಬಕ್ಸೈತ್ ಮತ್ತು ಭತ್ತಾ

೨೪. ಈಶಾನ್ಯ ರೈಲ್ವೆ ಯ ಕೇಂದ್ರ ಕಚೆರಿಯು ಇರುವುದೆಲ್ಲೆಂದರೆ

೧. ಗೊರಖ್ಪುರ್ ೨. ಗೌಹಾಟಿ

೩. ಕೊಲ್ಕ್ತಾತ ೪. ದೀಮಾಪುರ್

೨೫. ಸೊಸೈಟಿ ಆಫ್ ಜೀಸಸ್ ನ ಸಂಸ್ಥಾಪಕ ಯಾರೆಂದರೆ ....

೧. ಮಾರ್ಟಿನ್ ಲೂಥರ್ ೨. ಇಜ್ಞೆಸಿಯಸ್ ಲಯಲಾ

೩. ಗ್ಯಾರಿಬಾಲ್ದಿ ೪. ಮೂರನೆ ಹೆನ್ರಿ



Wednesday, March 19, 2008

ಸಿ .ಇ. ಟಿ.

ಸಮಾಜ ವಿಜ್ಞಾನ (೨೦೦೨)
-----------------------------------------------

೧.ಆಪ್ರಿಕಾ ಖಂಡದ ದಕ್ಷಿಣದ ತುದಿಯನ್ನು " ಕೆಫ್ ಆಫ್ ಸ್ತಾರ್ಮ್ಸ್ "

ಎಂದು ಕರೆದ ಪೋರ್ಚುಗಿಸ್ ನಾವಿಕನಾರೆಂದರೆ .......

೧. ಹೆನ್ರಿ ದಿ ನಾವಿಗೆಟರ ೨. ಫಾರ್ಡಿನಾಂದ್ ಮೆಗಲನ್

೨. ಬಾರ್ತೊಲೋಮಿಯೋ ಡಯಾಜ್ ೪. ಕ್ರಿಸ್ತೋಪರ್ ಕೊಲೊಂಬಸ್

೨. ಬಂಗಾಲದ ೨೪ ಪರಗನಗಳನ್ನು ಇಂಗ್ಲಿಷರಿಗೆ ಕೊಟ್ಟವನಾರೆಂದರೆ...

೧. ಸಿರಾಜ್ದ್ದೌಲ್ ೨. ಶೇರ್ ಷಾ ಸೂರಿ

೩. ಮೀರ್ ಖಾಸಿಂ ೪. ಮೀರ್ ಜಾಫರ

೩. ಸತಿ ಪದ್ದತಿಯನ್ನು ನಿಷೆದಿಸಿದ್ದುದು ಯಾರ ಕಾಲದಲ್ಲೆಂದರೆ

೧. ಲಾರ್ಡ್ ಹೆಸ್ತಿಂಗ್ಸ ೨. ಲಾರ್ಡ್ ಕಾರ್ನವಾಲಿಸ್

೩. ವಿಲಿಯಮ್ ಬೆನ್ತಿಕ್ ೪. ದಾಲ್ ಹೌಸಿ

೪. ಕ್ಯೂನಿ ಫಾರಂ ಬಗೆಯ ಚಿನ್ಹಾದಾರಿತ ಭಾಷೆಯನ್ನೂ ಬಲೆಸಿದವರು ಯಾರೆಂದರೆ

೧. ಈಜಿಪ್ತಿಯನ್ನರು ೨. ಮೆಸೋಪೋತೊಮಿಯಾದವರು

೩. ಸಿಂಧೂ ಕಣಿವೆ ಜನರು ೪. ಚೀನೀಯರು

೫. ಕವಿರಾಜಮಾರ್ಗವು ಹಿಂದಿನ ಕನ್ನಡದ ಶ್ರೇಷ್ಠ ಸಾಹಿತ್ಯ ವಾಗಿದ್ದು

ಅದು ರಚೆನೆಯಾದದ್ದು ಯಾವ ರಾಜ ವಂಶ ಕಾಲದಲ್ಲೆಂದರೆ

೧. ಬಾದಾಮಿ ಚಾಲುಕ್ಯರು ೨. ತಲಕಾಡಿನ ಗಂಗರು

೩. ಲತ್ತೂರಿನ ರಾಷ್ಟ್ರಕೂಟರು ೪. ಬನವಾಸಿಯ ಕದಂಬರು

೬. ಭಾರತದ ಸಂವಿಧಾನವು ಜಾರಿಗೆ ಬಂದ ತಾರೀಖು ಯಾವುದೆಂದರೆ

೧. ೧೫ ನೆ ಆಗಸ್ಟ್ ೧೯೪೭ ೨. ೧೬ ನೆ ಆಗಸ್ಟ್ ೧೯೪೭

೩. ೨೬ ನೆ ಜನೆವರಿ ೧೯೫೦ ೪. ೨೬ ನೆ ಜನೆವರಿ ೧೯೫೬

೭. ರಾಜ್ಯಗಳ ನ್ಯಾಯಾಂಗ ದಲ್ಲಿ ಜಿಲ್ಲಮಟ್ಟದ ಕೋರ್ಟಿನ ಹೆಸರಾವದೆಂದರೆ

೧. ಮುನಿಸಿಬ್ ಕೋರ್ಟ್ ೨. ಮೆಜಿಸ್ತ್ರತೆ ಕೋರ್ಟ್

೩. ಸೆಷನ್ಸ ಕೋರ್ಟ್ ೪. ಉಚ್ಹ ನ್ಯಾಯಾಲಯದ ಉಪ ಪೀಠ

೮. ವಿಶ್ವ ಸಂಸ್ಥೆಯ ಸ್ತಾಪನೆಯಾದ ತಾರೀಖು

೧. ೨೪ ನೆ ಅಕ್ಟೋಬರ್ ೧೯೪೩ ೨. ೨೫ ನೆ ಅಕ್ಟೋಬರ್ ೧೯೫೦

೩. ೨೫ ನೆ ಅಕ್ಟೋಬರ್ ೧೯೫೧ ೪. ೨೪ ನೆ ಅಕ್ಟೋಬರ್ ೧೯೪೫

೯. ೧೯೯೧ ನೆ ಜನಗಣತಿಯ ಪ್ರಕಾರ್ ಭಾರತದ ಸರಾಸರಿ ಸಾಕ್ಷರತಾ ಮಟ್ಟ

ಯಾವುದೆಂದರೆ

೧. ಶೇ . ೪೮.೪೭ ೨. ಶೇ.೫೨.೧೧

೩. ಶೇ. ೫೫. ೬೭ ೪. ಶೇ. ೩೯.೪೨

೧೦. ಸಮಾಜವಾದಕ್ಕೆ ಹೊರತಾದ ವ್ಯಕ್ತಿ ಯಾರೆಂದರೆ

೧. ಸೈಂಟ್ ಸೈಮನ್ ೨. ಕೆನಡಿ . ಜಿ.ಎಫ್

೩. ರಾಬರ್ಟ್ ಓವನ್ ೪. ಕಾಲ್ಮಾರ್ಕ್ಸ್

೧೧. ಒಂದು ದೇಶದ ಆರ್ಥಿಕ ಮಟ್ಟವನ್ನು ತಲಾದಾಯವು ನಿರ್ಧರಿಸುತ್ತದೆ

ಆಯಾ ದೇಶಗಳಿಗೆ ಸಂಭಂದಿಸಿದ ತಲಾದಾಯವನ್ನಾಧರಿಸಿ ಇಲಿಮುಖವಾಗಿರುವ

ದೇಶಗಳನ್ನು ಗುರುತಿಸಿ .

೧. ಅ.ಸಂ . ಸ್ಥಾ. ಭಾರತ ,ಬ್ರೆಜಿಲ್ ೨. ಅ.ಸಂ. ಸ್ಥಾ. ಬ್ರೆಜಿಲ್,ಭಾರತ

೩. ಬಾಂಗ್ಲಾದೇಶ್ , ಭಾರತ , ಪಾಕಿಸ್ತಾನ ೪. ಚೀನಾ ,ಯು.ಕೆ.,ಜಪಾನ್

೧೨. ಭಾರತದ ರಿಸರ್ವ್ ಬ್ಯಾಂಕಿನ ಕಾರ್ಯ ಗಳಿಗೆ ಹೊರತಾದುದು

೧. ಹಣವನ್ನು ಚಲಾವಣೆಗೆ ತರುವುದು ೨. ಇತರೆ ಬ್ಯಾಂಕುಗಳಿಗೆ

ಮುಂಗದವನ್ನು ಕೊಡುವುದು 3 . ಸರ್ಕಾರಕ್ಕೆ ಅದು ಬ್ಯಾಂಕ್

೪. ಕೈಕಾರಿಕೆಗಳ ನಿತ್ಯತದ ಹಣಕಾಸನ್ನು ನಿಭಾಯಿಸುವುದು

೧೩. ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ ಅಸ್ತಿತ್ವಕ್ಕೆ ಬಂದ ಇಸವಿ

೧. ೧೯೩೫ ೨. ೧೯೬೦ ೩. ೧೯೫೫ ೪. ೧೯೬೯

೧೪. ಭಾರತದ ೮ ಪಂಚವಾರ್ಷಿಕ ಯೋಜನೆಯ ಅವದಿಯು ಎಲ್ಲಿಂದ ಎಲ್ಲಿಗೆ

ಎಂದರೆ ...

೧. ೧೯೯೦ -೯೫ ೨. ೧೯೯೨ -೯೭ ೩.೧೯೯೧-೯೬ ೪. ೧೯೯೩-೯೮

೧೫. ಪ್ರಖ್ಯಾತ ಫ್ರೈ ರಿ ಹುಲ್ಲುಗಾವಲುಗಳು ಹಬ್ಬಿರುವುದು ಎಲ್ಲೆಂದರೆ

೧. ಅರ್ಜೆನ್ತೆನಾ ಮತ್ತು ಉರುಗ್ವೆ ೨. ಅ.ಸಂ.ಸ್ಥಾ. ಮತ್ತು ಕೆನಡಾ

೩. ಹಂಗೇರಿ ಮತ್ತು ರಸ್ಯಾ ೪. ಆಗ್ನೇಯ ಆಸ್ಟ್ರೇಲಿಯಾ

೧೬. ಜರ್ಮನಿ ದೇಶದ ರೂ :ರ ಕೈಗಾರಿಕಾ ಪ್ರದೇಶವು ಯಾವ ನದಿಯ

ದಡದಲ್ಲಿದೆ ಎಂದರೆ

೧. ಥೇಮ್ಸ್ ೨. ವೋಲ್ಗಾ ೩. ರೋ ನ್ಹಾ ೪. ರೈನಾ

೧೭. ಭೂಮಿಯ ವಾಯುಮಂದಲದಲ್ಲಿ ಉಷ್ನಾನ್ಶ ಮತ್ತು ಒತ್ತಡ ಗಳೆರಡೂ

೧. ಎತ್ತರ ಹೆಚ್ಚಾದನ್ತೆಲ್ಲಾ ಅವು ಸಹ ಏರುವವು

೨. ಅಸ್ತೆನು ವ್ಯತ್ಯಾಸವಗುವುದಿಲ್ಲಾ

೩. ಎತ್ತರ ಹೆಚ್ಚದನ್ತೆಲ್ಲಾ ಅವು ಕಡಿಮೆಯಾಗುವವು

೪. ಆಧುನಿಕ ಮಾನವನ ಪರಿಣಾಮ ದಿಂದಾಗಿ ವ್ಯತ್ಯಾಸವಗುವವು

೧೮. ಭಾರತಲ್ಲಿ ಆಗುವ ಹೆಚ್ಚಿನ ಮಳೆಯು ಯಾವ ಬಗೆಯದಾಗಿದೆಯಂದರೆ

೧. ಪರಿಸರಣ ಬಗೆಯದು ೨. ಭೂ ಸ್ವರೂಪ ತಡೆಯುಕೆಯಿಂದಾದು

೩. ಆವರ್ತಗಳಿಗೆ ಸಂಭಂದಿಸಿದುದು ೪. ಈ ಮೇಲಿನ ಯಾವುದು ಅಲ್ಲಾ