Monday, March 23, 2009

ನವ ವರ್ಷ

ಈ ನವ ವರ್ಷ

ನೀಡಲಿ ನೆಮ್ಮದಿ ಹರ್ಷ

ಹೊಡೆದು ಹಾಕಲಿ ಈ ಹೊಸ ವರ್ಷ

ಮನಸು -ಮನಸುಗಳಲ್ಲಿನ ಸಂಘರ್ಷ


ದೂರವಾಗಲಿ ಈ ವರ್ಷ ಭಯೋತ್ಪಾದಕರ ಅಟ್ಟಹಾಸ

ಬೀರಲಿ ನಮ್ಮವರು ನೆಮ್ಮದಿಯ ಮಂದಹಾಸ

ಸೇರಲಿ ನನ್ನ ಬಾಂಧವರ ಹೃದಯ ನಿವಾಸ

ಭ್ರಾತೃತ್ವ ,ಸ್ನೇಹ ,ಪ್ರೀತಿ ,ಉಲ್ಲಾಸ .

ಜಶಿಪೂ...............



ಯೋಗ

ಮೂಡಿದೆ ನನ್ನಲಿ ಅನುರಾಗ

ಚೆಲುವೆ ನಿನ್ನ ಆನನ ಕಂಡಾಗ

ಧುಮ್ಮಿಕ್ಕಿದೆ ಒಲವು ಆಗಿ ಆ ಜೋಗ

ಕೂಡುವುದೇ ಸಂಗಮವಾಗುವ ಯೋಗ?

ಜಶಿಪೂ ...................



Saturday, November 29, 2008

೨೬ ನೇ ದಿನಾಂಕಗಳಂದು ಭಾರತಲ್ಲಿ ನಡೆದ ಕಹಿ ಘಟನೆಗಳು

೧.೨೬ ಜನವರಿ ೨೦೦೧ ಗುಜರಾತನ ಕಚ್ ನಲ್ಲಿ ಭೂಕಂಪ.
೨. ೨೬ ಫೆಬ್ರವರಿ ೨೦೦೨ ಗೋದ್ರ ಹತ್ಯಾಕಾಂಡ .
೩. ೨೬ ಡಿಸೆಂಬರ ೨೦೦೪ ಸುನಾಮಿ ದುರಂತ್ ಸು.೧ ಮಿ ಜನ ಆಹುತಿ.
೪. ೨೬ ಜೂನ್ ೨೦೦೭ ಗುಜರಾತ ನಲ್ಲಿ ಪ್ರವಾಹ .
೫. ೨೬ ಸೆಪ್ಟೆಂಬರ್ ೨೦೦೮ ಅಹ್ಮದಾಬಾದ್ನಲ್ಲಿ ಸ್ಪೋಟ್.
೬. ೨೬ ನವೆಂಬರ್ ೨೦೦೮ ಭಾರತದ ಪ್ರತಿಷ್ಟಿತ ಹೋಟೆಲ್ ತಾಜ್ ನಲ್ಲಿ ಉಗ್ರರ ಅಟ್ಟಹಾಸ.
ಈ ದಾಳಿ ಕೇವಲ ತಾಜ್ ಮೇಲೆ ಅಲ್ಲದೆ ಹೋಟೆಲ್ ಒಬೆರೈ ಮತ್ತು ನಾರಿಮನ್ ಹೌಸ್ ಗಳ
ಮೇಲೆ ನಡೆಯಿತು.


Saturday, September 6, 2008

೫ .೧೯೭೪ ರಿಂದ ಬಿಕ್ಕಟ್ಟಿಗೆ ಸಿಲುಕಿದ್ದ ನಾಗರಿಕ ಪರಮಾಣು ಒಪ್ಪಂದಕ್ಕೆ ೬ /೦೯ /೨೦೦೮ ರಂದು

ಏನ್ ಎಸ್ ಜಿ ರಾಷ್ಟ್ರಗಳಿಂದ ಒಪ್ಪಿಗೆ ಪಡೆದು ಐತಿಹಾಸಿಕ ಒಪ್ಪಂದ ವಾಯಿತು ( ಪ್ರಧಾನಿ ಮನಮೋಹನ್

ಸಿಂಗ್ ಆಗಿದ್ದರು )

೩ . ೨೦೦೮ ರ ಒಲಂಪಿಕ್ ನಲ್ಲಿ ಭಾರತಕ್ಕೆ ೩ ಪದಕಗಳು ಲಭಿಸಿವೆ .

೪ . ಬಾಕ್ಸಿಂಗ್ ನಲ್ಲಿ ಮತ್ತು ಕುಸ್ತಿಯಲ್ಲಿ ಕಂಚಿನ ಪದಕಗಳು ಲಭಿಸಿವೆ .

೧.೨೮ ವರ್ಷಗಳ ನಂತರ ಒಲಂಪಿಕ್ ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನ
ಅಭಿನವ್ ಬಿಂದ್ರಾ ೨೦೦೮ ರಲ್ಲಿ ತಂದು ಕೊಟ್ಟರು (ಶೂಟಿಂಗನಲ್ಲಿ)

೨. ಅಮೆರಿಕದ ಮೈಕಲ್ ಫೆಲ್ಪ್ಸ್ ಒಲಂಪಿಕ್ ನಲ್ಲಿ ( ೨೦೦೮ ) ೮ ಚಿನ್ನದ
ಪದಕ ಪಡೆದು ದಾಖಲೆ ಮಾಡಿದ್ದರೆ .(swiming)

Saturday, May 10, 2008

ಒಲವಿನ ಸಿರಿ

ನನ್ನ ಹೃದಯೇಶ್ವರಿ

ನೀ ಆಗುವೆಯಾ ಈಶ್ವರಿ ?

ಹೃದಯ ಕೇಳುತ್ತಿದೆ ನಿನ್ನ ಪರಿ ಪರಿ

ಕರುಣಿಸೆ ನಿನ್ನೊಲವಿನ ಸಿರಿ


ಸುತ್ತುತ್ತಿದೆ ಮನ ದುಂಬಿಯಾಗಿ

ನಿನ್ನೊಲವಿನ ಸಿಹಿ ಮಕರಂದಕಾಗಿ

ನೀಡು ನಿನ್ನ ಹೃದಯ ಪುಷ್ಪವನು ನನಗಾಗಿ

ಸವಿಯಲು ಪ್ರೀತಿಯ ಮಕರಂದವನು ಆನಂದವಾಗಿ