Saturday, November 29, 2008

೨೬ ನೇ ದಿನಾಂಕಗಳಂದು ಭಾರತಲ್ಲಿ ನಡೆದ ಕಹಿ ಘಟನೆಗಳು

೧.೨೬ ಜನವರಿ ೨೦೦೧ ಗುಜರಾತನ ಕಚ್ ನಲ್ಲಿ ಭೂಕಂಪ.
೨. ೨೬ ಫೆಬ್ರವರಿ ೨೦೦೨ ಗೋದ್ರ ಹತ್ಯಾಕಾಂಡ .
೩. ೨೬ ಡಿಸೆಂಬರ ೨೦೦೪ ಸುನಾಮಿ ದುರಂತ್ ಸು.೧ ಮಿ ಜನ ಆಹುತಿ.
೪. ೨೬ ಜೂನ್ ೨೦೦೭ ಗುಜರಾತ ನಲ್ಲಿ ಪ್ರವಾಹ .
೫. ೨೬ ಸೆಪ್ಟೆಂಬರ್ ೨೦೦೮ ಅಹ್ಮದಾಬಾದ್ನಲ್ಲಿ ಸ್ಪೋಟ್.
೬. ೨೬ ನವೆಂಬರ್ ೨೦೦೮ ಭಾರತದ ಪ್ರತಿಷ್ಟಿತ ಹೋಟೆಲ್ ತಾಜ್ ನಲ್ಲಿ ಉಗ್ರರ ಅಟ್ಟಹಾಸ.
ಈ ದಾಳಿ ಕೇವಲ ತಾಜ್ ಮೇಲೆ ಅಲ್ಲದೆ ಹೋಟೆಲ್ ಒಬೆರೈ ಮತ್ತು ನಾರಿಮನ್ ಹೌಸ್ ಗಳ
ಮೇಲೆ ನಡೆಯಿತು.


Saturday, September 6, 2008

೫ .೧೯೭೪ ರಿಂದ ಬಿಕ್ಕಟ್ಟಿಗೆ ಸಿಲುಕಿದ್ದ ನಾಗರಿಕ ಪರಮಾಣು ಒಪ್ಪಂದಕ್ಕೆ ೬ /೦೯ /೨೦೦೮ ರಂದು

ಏನ್ ಎಸ್ ಜಿ ರಾಷ್ಟ್ರಗಳಿಂದ ಒಪ್ಪಿಗೆ ಪಡೆದು ಐತಿಹಾಸಿಕ ಒಪ್ಪಂದ ವಾಯಿತು ( ಪ್ರಧಾನಿ ಮನಮೋಹನ್

ಸಿಂಗ್ ಆಗಿದ್ದರು )

೩ . ೨೦೦೮ ರ ಒಲಂಪಿಕ್ ನಲ್ಲಿ ಭಾರತಕ್ಕೆ ೩ ಪದಕಗಳು ಲಭಿಸಿವೆ .

೪ . ಬಾಕ್ಸಿಂಗ್ ನಲ್ಲಿ ಮತ್ತು ಕುಸ್ತಿಯಲ್ಲಿ ಕಂಚಿನ ಪದಕಗಳು ಲಭಿಸಿವೆ .

೧.೨೮ ವರ್ಷಗಳ ನಂತರ ಒಲಂಪಿಕ್ ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನ
ಅಭಿನವ್ ಬಿಂದ್ರಾ ೨೦೦೮ ರಲ್ಲಿ ತಂದು ಕೊಟ್ಟರು (ಶೂಟಿಂಗನಲ್ಲಿ)

೨. ಅಮೆರಿಕದ ಮೈಕಲ್ ಫೆಲ್ಪ್ಸ್ ಒಲಂಪಿಕ್ ನಲ್ಲಿ ( ೨೦೦೮ ) ೮ ಚಿನ್ನದ
ಪದಕ ಪಡೆದು ದಾಖಲೆ ಮಾಡಿದ್ದರೆ .(swiming)

Saturday, May 10, 2008

ಒಲವಿನ ಸಿರಿ

ನನ್ನ ಹೃದಯೇಶ್ವರಿ

ನೀ ಆಗುವೆಯಾ ಈಶ್ವರಿ ?

ಹೃದಯ ಕೇಳುತ್ತಿದೆ ನಿನ್ನ ಪರಿ ಪರಿ

ಕರುಣಿಸೆ ನಿನ್ನೊಲವಿನ ಸಿರಿ


ಸುತ್ತುತ್ತಿದೆ ಮನ ದುಂಬಿಯಾಗಿ

ನಿನ್ನೊಲವಿನ ಸಿಹಿ ಮಕರಂದಕಾಗಿ

ನೀಡು ನಿನ್ನ ಹೃದಯ ಪುಷ್ಪವನು ನನಗಾಗಿ

ಸವಿಯಲು ಪ್ರೀತಿಯ ಮಕರಂದವನು ಆನಂದವಾಗಿ

Monday, May 5, 2008

ನನ್ನವಳು ಬಳಕುವ ಬಳ್ಳಿ

ನನ್ನವಳು ಬಳಕುವ ಬಳ್ಳಿ

ನನ್ನ ಹೃದಯದ ಕಳ್ಳಿ


ಆದರೂ ಅವಳು ಬಲು ಸುಳ್ಳಿ


ಹೇಳುತ್ತಾಳೆ ನಾನಲ್ಲ ನಿಮ್ಮ ಹೃದಯ ಕಳ್ಳಿ



ಅವಳ ಓರೆ ಕಣ್ಣಿನ ನೋಟ

ಮಾಡಿಸಿದೆ ನನ್ನ ಮನಕೆ ಮಾಟ

ಇದು ಖಂಡಿತ ದಿಟ

ಕಾರಣ ನನಗೆ ಸೇರುತ್ತಿಲ್ಲ ಊಟ


ಬೆಳಗಿನ ಜಾವದಲ್ಲಿ

ನಿಲ್ಲುವಳು ಹೂ ಕೀಳುತ್ತಾ ಅಂಗಳದಲ್ಲಿ

ಕಣ್ಣು ಮಿಟುಕಿಸಿ ಸೇರುವಳು ಕೋಣೆಯಲ್ಲಿ

ಸಿಲುಕಿಸಿ ನನ್ನನ್ನು ಸಂಕಷ್ಟದಲ್ಲಿ


ಅವಳಿಗಾಗಿ ಓಡಾಡುತ್ತಿರಲು ನಾ ಅಂಗಳದಲ್ಲಿ

ಕದ್ದು ನೋಡುತ್ತಾಳೆ ಕಿಡಕಿಯಲ್ಲಿ

ಎಬ್ಬಿಸಿದವಳೇ ಅಲೆಯನ್ನು ಹೃದಯದಲ್ಲಿ

ಮರೆಯಾಗುವಳು ಕಿಟಕಿಯ ಪರದೆಯಲ್ಲಿ

Tuesday, April 1, 2008

ಮನಸೆಂಬ ಹಕ್ಕಿ

ಮನಸು ಆಗಬೇಕೆಂದಿದೆ ಹಾರುವ ಹಕ್ಕಿ

ನೀ ತೊಡಿಸೆ ನಿನ್ನೊಲವಿನ ರೆಕ್ಕಿ

ನಾವ್ ಹಾರೋಣ ಆ ಮೋಡಕು ಮಿಕ್ಕಿ

ತರೋಣ ಆ ಸೂರ್ಯನೆಂಬ ಚುಕ್ಕಿ


ಆ ಸೂರ್ಯನೆಂಬ ಚುಕ್ಕಿಯ ಶಕ್ತಿ

ನಮಗಾಗಲಿ ಉರಿಯುವ ಮೇಣದ ಬತ್ತಿ

ಆ ಬೆಳಕಲ್ಲಿ ನಾವ್ ಬಿಚ್ಚೋಣ ಪ್ರಣಯದ ಬುತ್ತಿ

ಸುಳಿಯಲಾಗದೆ ಕತ್ತಲು ಸುಸ್ತಾಗಲಿ ಸುತ್ತಿ ಸುತ್ತಿ


ಉಂದಾದ ಮೇಲೆ ಪ್ರಣಯದ ಬುತ್ತಿ

ಇಟ್ಟ ಬರೋಣ ಆ ಕರಗದ ಮೇಣದ ಬತ್ತಿ

ಪಾಪ ! ಕತ್ತಲಿಗೆ ಸಿಗಲಿ ಮುಕ್ತಿ

ಕಾಯುತ್ತಿದೆ ಅಗಲಿಸಲು ನಮ್ಮನು ಆ ವಿರಹದ ಕತ್ತಿ